ಗ್ಲೂಟತಯೋನ್

	ಬದುಕಿರುವ ಬಹುಪಾಲು ಎಲ್ಲ ಕೋಶಗಳಲ್ಲೂ ಇರುವ ಗಂಧಕಯುಕ್ತ ರಾಸಾಯನಿಕ ಸಂಯುಕ್ತ. ವಿಕಿರಣತೆಯೊಂದಿಗೆ ಜೀವಿಗೆ ಹೆಚ್ಚಾಗಿ ಕೊಟ್ಟಲ್ಲಿ ಅದರ ಅಪಾಯ ತಟ್ಟದಂತೆ ಇದು ತಡೆಯ ಬಲ್ಲದು. ಊತಕಗಳ ವಿಕಿರಣತೆಯಿಂದ ಹುಟ್ಟುವ ಪೆರಾಕ್ಸೈಡುಗಳೊಂದಿಗೆ ಸುಲಭವಾಗಿ ಸೇರುವುದರಿಂದ ಹೀಗಾಗುವುದು. ಗ್ಲೂಟತಯೋನ್ ಹೇರಳವಾಗಿರುವ ಈಲಿಸ್ನಾಯು, ಹುದುಗುಗಳೇ ಇದರ ತಯಾರಿಕೆಗೆ ಮೂಲವಸ್ತುಗಳು. ಈ ಸಂಯುಕ್ತವನ್ನು ಹಾಪ್ಕಿನ್ಸ್ ಕಂಡುಹಿಡಿದಾಗಿನಿಂದ (1921) , ಮೈಯಲ್ಲಿ ಇದರ ಪಾತ್ರದ ವಿಚಾರವಾಗಿ ಶೋಧನೆ ನಡೆದಿದೆ. ಯಾವ ಕೋಶ ಬದುಕಿ ಬಾಳಬೇಕಾದರೂ ಬೇಕಾಗುವ ಎಷ್ಟೊ ಎಂeóÉೈಮುಗಳ ಕೆಲಸಗಳಿಗೆ ಇದರ ನೆರವು ಬೇಕೇಬೇಕು. ಇಷ್ಟಕ್ಕೆಲ್ಲ ಇದರಲ್ಲಿರುವ ಗಂಧಕವೇ ಕಾರಣ. ಎಂeóÉೈಮುಗಳಲ್ಲೂ ಸಲ್ಫ ಹೈಡ್ರಿಲ್ (Sಊ) ಗುಂಪುಗಳಿದ್ದರೂ ಅವಕ್ಕೆ ಆಕ್ಸಿಜನ್ ಕೂಡಿದಾಗ ಡೈಸಲ್ಫೈಡ್ ರೂಪಕ್ಕಿಳಿದು ಕೆಲಸಕ್ಕೆ ಬಾರದಾಗುತ್ತವೆ. ಈ ತಂಡಗಳನ್ನು ಮತ್ತೆ ಸಲ್ಫಹೈಡ್ರಿಲುಗಳಾಗಿ ಬದಲಿಸಿ ಚುರುಕುಗೊಳಿಸುವುದೇ ಗ್ಲೂಟತಯೋನಿನ ಹೆಚ್ಚಳಿಕೆ ಇದು ಕೋಶಗಳಲ್ಲಿನ ಎಂeóÉೈಮುಗಳನ್ನು ಅಂಕೆಗೆ ಒಳಪಡಿಸುವುದು. ಗ್ಲೂಟಾಮಿಕ್ ಆಮ್ಲ, ಸಿಸ್ಟೀನ್ ಗ್ಲೈಸೀನ್ ಅಮೈನೊ ಆಮ್ಲಗಳು ಸೇರಿ ಗ್ಲೂಟತಯೋನ್ ಆಗಿರುವ ರೀತಿ ಸಹಸ್ರಾರು ಅಮೈನೋ ಆಮ್ಲಗಳು ಸೇರಿ ಆಗಿರುವ ಪ್ರೋಟೀನನ್ನು ಹೋಲುತ್ತದೆ. ಕೋಶಗಳ ಬೆಳೆವಣಿಗೆ ವಿಕಾಸಗಳಲ್ಲಿ ಪ್ರೋಟೀನುಗಳು ಮುಖ್ಯ ಘಟಕಗಳಾದ್ದರಿಂದ ಇವುಗಳ ರೀತಿಯನ್ನು ಚೆನ್ನಾಗಿ ಅರಿಯಲು ಗ್ಲೂಟತಯೋನನ್ನು ಸುಲಭವಾಗಿ ಸರಳ ಮಾದರಿಯ ಮೂಲವಸ್ತುವಾಗಿ ವ್ಯಾಸಂಗಮಾಡಿದ್ದಾರೆ.													(ಡಿ.ಎಸ್.ಎಸ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ